ರಾಶಿ ಭವಿಷ್ಯ 2020: ಇಂದಿನ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನವನ್ನು ನವೀಕರಿಸಲು ಪ್ರಯತ್ನಿಸುತ್ತಾನೆ. ತನ್ನ ಮುಂಬರುವ ಸಮಯವೂ ಹೇಗಿರುತ್ತದೆ ಎಂದು ತಿಳಿಯಲು ಆಶಿಸುತ್ತಾನೆ. ಪ್ರತಿಯೊಬ್ಬ ವ್ಯಕ್ತಿಯು ಹೊಸ ವರ್ಷವನ್ನು ಹೊಸದಾಗಿ ಪ್ರಾರಂಭಿಸಲು ಯೋಚಿಸುತ್ತಾನೆ. ವ್ಯಕ್ತಿಯ ಈ ಆಸೆಯನ್ನು ಈಡೇರಿಸಲು ನಾವು ವರ್ಷ 2020 ರ ವಾರ್ಷಿಕ ಭವಿಷ್ಯವನ್ನು ಮುನ್ಸೂಚನೆಯಾಗಿ ನಿಮಗೆ ತಿಳಿಸುತ್ತಿದ್ದೇವೆ. ನಿಮ್ಮ ಸಂಪೂರ್ಣ ವರ್ಷ ಹೇಗೆ ಕಳೆಯಲಾಗುತ್ತದೆ, ಏನಾದರು ತೊಂದರೆಗಳಿದ್ದರೆ, ಅವುಗಳ ಪರಿಹಾರ ಏನಿರಬೇಕು ಎಂಬುದನ್ನು ನೀವು ವಾರ್ಷಿಕ ರಾಶಿಫಲ 2020 ರ ಮೂಲಕ ತಿಳಿದುಕೊಳ್ಳಬಹುದು. ಈ ವಾರ್ಷಿಕ ರಾಶಿ ಜಾತಕದ ಮೂಲಕ ನೀವು ಒಬ್ಬ ವ್ಯಕ್ತಿಯ ಉದ್ಯೋಗ, ಸಮಯ, ವ್ಯಾಪಾರ, ಸಂಪತ್ತು, ವಿವಾಹ, ಪ್ರೀತಿ, ಶಿಕ್ಷಣ, ಕುಟುಂಬ ಜೀವನ ಮತ್ತು ವೈವಾಹಿಕ ಜೀವನ ಇತ್ಯಾದಿಗಳ ಮುನ್ಸೂಚನ್ಗೆಗಳನ್ನು ನೀವು ಪಡೆಯಬಹುದು . ಇದು ಮಾತ್ರವಲ್ಲ ಈ ಎಲ್ಲಾ ಕ್ಷೇತ್ರಗಳಲ್ಲಿ ನೀವು ಏನಾದರು ಸಮಸ್ಯೆಗಳನ್ನು ಹೊಂದಿದ್ದರೆ , ಆ ಸಮಸ್ಯೆಗಳನ್ನು ನಿವಾರಿಸಲು ಸುಲಭವಾದ ಪರಿಹಾರಗಳನ್ನು ಸಹ ನೀವು ಈ ವಾರ್ಷಿಕ ರಾಶಿಫಲ 2020 ರಲ್ಲಿ ಪಡೆಯಬಹುದು
ವೈದಿಕ ಜ್ಯೋತಿಷ್ಯದ ಪ್ರಕಾರ ನಕ್ಷತ್ರಪುಂಜಗಳನ್ನು ಹನ್ನೆರಡು ರಾಶಿಗಳಲ್ಲಿ ವಿಂಗಡಿಸಲಾಗಿದೆ. ಪ್ರತಿಯೊಂದು ರಾಶಿಚಕ್ರದ ಸ್ವಾಮಿ ಬೇರೆ ಬೇರೆ ಗ್ರಹಗಳಾಗಿರುತ್ತವೆ ಮತ್ತು ಅವು ವಿಭಿನ್ನ ಪರಿಣಾಮಗಳನ್ನು ಹೊಂದಿರುತ್ತವೆ. ಈ ನಕ್ಷತ್ರಪುಂಜಗಳು, ರಾಶಿಚಿಹ್ನೆಗಳು ಮತ್ತು ಗ್ರಹಗಳ ಮೂಲಕ ಒಬ್ಬ ವ್ಯಕ್ತಿಯ ಸಮಯ ಹೇಗಿರುತ್ತದೆ ಎಂಬುದನ್ನು ನೀವು ತಿಳಿಯಬಹುದು. ಹನ್ನೆರಡು ರಾಶಿಚಕ್ರಗಳ ಭವಿಷ್ಯವು ಕೆಳಗೆ ತಿಳಿಸಲಾಗಿದೆ:-
ವಾರ್ಷಿಕ
ರಾಶಿಫಲ 2020 ರ ಪ್ರಕಾರ, ಮೇಷ ರಾಶಿಚಕ್ರದ ಜನರಿಗೆ ವರ್ಷದ ಆರಂಭದಲ್ಲಿ ಪರಿಸ್ಥಿತಿಗಳು ಏರಿಳಿತಗಳಿಂದ
ತುಂಬಿರುತ್ತವೆ. ಇದು ನಿಮ್ಮ ಆರೋಗ್ಯವನ್ನು ಹದಗೆಡಿಸಬಹುದು. ಆದ್ದರಿಂದ ನೀವು ನಿಮ್ಮ ಆರೋಗ್ಯದ ಬಗ್ಗೆ
ವಿಶೇಷಾಗಿ ಕಾಳಜಿ ವಹಿಸಬೇಕು. ಪ್ರೀತಿಯ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಪ್ರೀತಿಯ ವಿವಾಹ ಬಯಸುವವರು, ನಿಮ್ಮ ಆಸೆಯನ್ನು ಈಡೇರಿಸಲು ಬಹಳಷ್ಟು ಪ್ರಯತ್ನವನ್ನು ಮಾಡಬೇಕಾಗುತ್ತದೆ.
ವೃತ್ತಿ ಜೀವನದ ಬಗ್ಗೆ ಮಾತನಾಡಿದರೆ, ಈ ವರ್ಷ ನಿಮಗೆ ಉತ್ತಮ ಅವಕಾಶಗಳು ಸಿಗುತ್ತವೆ. ಇದರಿಂದ ನಿಮ್ಮ
ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಸಾಧ್ಯವಾಗುತ್ತದೆ. ಮಕ್ಕಳ ಬದಿಯಿಂದ ನೀವು ಸಂತೋಷವನ್ನು ಪಡೆಯುತ್ತೀರಿ
ಏಕೆಂದರೆ ಈ ವರ್ಷನಿಮ್ಮ ಮಕ್ಕಳು ಪ್ರಗತಿ ಹೊಂದುತ್ತಾರೆ. ತಂದೆಯ ಆರೋಗ್ಯವು ಹದಗೆಡಬಹುದು. ಆದ್ದರಿಂದ
ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಸಹಯೋದ್ಯೋಗಿ ಅಥವಾ ಸಮಬಂಧಿಕರ ಬೆಂಬಲವನ್ನು ನೀವು
ಪಡೆಯಬಹುದು. ಈ ವರ್ಷ ನೀವು ಹಠಾತ್ ಹಣವನ್ನು ಕೂಡ ಪಡೆಯಬಹುದು. ನೀವು ಪ್ರವಾಸಕ್ಕೆ ಹೋಗುವ ಸಾಧ್ಯತೆ
ಇದೆ, ಆದರೆ ಪವಾಸದ ಸಮಯದಲ್ಲಿ ಜಾಗರೂಕರಾಗಿರಬೇಕು ಏಕೆಂದರೆ ನಿಮ್ಮೊಂದಿಗೆ ಅಪಘಾತ ಸಂಭವಿಸುವ ಯೋಗವಿದೆ.
ವರ್ಷದ ಕೊನೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ಯಾವುದೇ ಮಂಗಳ ಕೆಲಸವನ್ನು ಮಾಡಬಹುದು.
ವಾರ್ಷಿಕ
ರಾಶಿಫಲ 2020 ರ ಪ್ರಕಾರ, ವೃಷಭ ರಾಶಿಚಕ್ರದ ಜನರು ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು, ವರ್ಷದ
ಆರಂಭದಲ್ಲಿ ಅನೇಕ ಸಮಸ್ಯೆಗಳನ್ನು ಹೊಂದಿರಬಹುದು ಆದರೆ ವರ್ಷದ ಕೊನೆಯಲ್ಲಿ ಸಮಯವೂ ಉತ್ತ್ತಮವಾಗಲಿದೆ.
ವೃತ್ತಿ ಜೀವನದ ಬಗ್ಗೆ ಮಾತನಾಡಿದರೆ, ಈ ವರ್ಷ ನೀವು ಉನ್ನತ ಹುದ್ದೆಯನ್ನು ಪಡೆಯಬಹುದು. ಇದರಿಂದ ನಿಮ್ಮ
ಜೀವನವನ್ನು ಬದಲಾಯಿಸಬಹುದು. ಸಂತಾನಕ್ಕೆ ವರ್ಷ ಸಾಮಾನ್ಯವಾಗಿರುತ್ತದೆ. ವಿದೇಶದಲ್ಲಿ ಶಿಕ್ಷಣ ಪಡೆಯಲು
ಬಯಸುವವರು, ಈ ವರ್ಷ ವಿದೇಶ ವಿಶ್ವವಿಧ್ಯಾಲಯದಲ್ಲಿ ಪ್ರವೇಶ ಪಡೆಯಬಹುದು. ಈ ವರ್ಷದಲ್ಲಿ ಗಳಿಕೆಗಾಗಿ
ಯಾವುದೇ ರೀತಿಯ ಹೂಡಿಕೆ ಮಾಡಬೇಡಿ, ಇಲ್ಲದಿದ್ದರೆ ಆರ್ಥಿಕ ಸವಾಲುಗಳನ್ನು ಎದುರಿಸಬೇಕಾಗಬಹುದು. ವೈವಾಹಿಕ
ಜೀವನವು ಸುಖ ಶಾಂತಿಯಿಂದ ತುಂಬಿರುತ್ತದೆ ಮತ್ತು ಯಾವುದೇ ಪ್ರಕಾರದ ದೊಡ್ಡ ತೊಂದರೆ ಹೊಂದಿಲ್ಲ. ವರ್ಷದ
ಕೊನೆಯಲ್ಲಿ ಬಹಳಷ್ಟು ನಿಮ್ಮ ತೊಂದರೆಗಳು ಕಡಿಮೆಯಾಗುತ್ತವೆ.
ವಾರ್ಷಿಕ
ರಾಶಿಫಲ 2020 ರ ಪ್ರಕಾರ, ಮಿಥುನ ರಾಶಿ ಚಕ್ರದ ಜನರ ಅರೋಗ್ಯ ಉತ್ತಮವಾಗಿರುತ್ತದೆ, ಇದರ ಹೊರೆತಾಗಿಯೂ
ವರ್ಷದ ನಡುವೆ ನಿಮಗೆ ಆರೋಗ್ಯದ ಬಗ್ಗೆ ವೈದ್ಯರ ಸಲಹೆಯ ಅಗತ್ಯವಿದೆ. ಆದ್ದರಿಂದ ಆರೋಗ್ಯದ ಸಣ್ಣ ಸಮಸ್ಯೆಯನ್ನು
ಸಹ ನಿರ್ಲಕ್ಷಿಸಬೇಡಿ. ವಿವಾಹಿತರು ತಮ್ಮ ಜೀವನ ಸಂಗಾತಿಯ ಅರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಪ್ರೀತಿಯ
ಸಂಬಂಧಗಳಿಗೆ ಸಮಯವೂ ಅನುಕೂಲಕರವಾಗಿದೆ. ಆದರೂ ಯಾವುದೇ ವಿಷಯದಿಂದ ನಿಮ್ಮಿಬ್ಬರ ನಡುವೆ ವಿವಾದ ಅಥವಾ
ಜಗಳವಾಗುವ ಸಾಧ್ಯತೆ ಇದೆ. ಆದರೆ ಜಾಗರೂಕತೆ ಮತ್ತು ಬುದ್ಧಿವಂತಿಕೆಯಿಂದ ನಡೆದರೆ ನಿಮ್ಮಿಬ್ಬರ ನಡುವಿನ
ಎಲ್ಲಾ ಸಮಸ್ಯೆಗಳನ್ನು ನಿವಾರಿಸಬಹುದು. ವಿದ್ಯಾರ್ಥಿಗಳಿಗೆ ಈ ವರ್ಷ ಉತ್ತಮವಾಗಲಿದೆ, ನೆನೆಸಿದ ಗುರಿಯನ್ನು
ಪಡೆಯುವ ಸಾಧ್ಯತೆ ಇದೆ. ಒಡಹುಟ್ಟಿದವರ ಪ್ರೀತಿ ಮತ್ತು ಬೆಂಬಲವನ್ನು ಪಡೆಯಬಹುದು. ವಿರೋಧಿಗಳ ಮೇಲೆ
ಪ್ರಾಬಲ್ಯ ಸಾಧಿಸಬಹುದು. ಕೆಲಸದ ಪ್ರದೇಶದ ಬಗ್ಗೆ ಮಾತನಾಡಿದರೆ, ಅನೇಕ ಏರಿಳಿತಗಳನ್ನು ಎದುರಿಸಬೇಕಾಗಬಹುದು.
ಆದ್ದರಿಂದ ನಿಮ್ಮ ಖರ್ಚುಗಳ ಹೆಚ್ಚಳವನ್ನು ತಪ್ಪಿಸಲು ಪ್ರಯತ್ನಿಸಬೇಕು.
ವಾರ್ಷಿಕ
ರಾಶಿಫಲ 2020 ರ ಪ್ರಕಾರ, ಕರ್ಕ ರಾಶಿಚಕ್ರದ ಜನರಿಗೆ ಈ ವರ್ಷ ಸಾಮಾನ್ಯವಾಗಿರುತ್ತದೆ. ಈ ಜಾತಕದವರು
ಉತ್ತಮ ಮತ್ತು ಸಮತೋಲಿತ ಆಹಾರವನ್ನು ಅಳವಡಿಸಿಕೊಳ್ಳಬೇಕು, ಏಕೆಂದರೆ ಕಳಪೆ ಆಹಾರದಿಂದ ನೀವು ಆರೋಗ್ಯಕ್ಕೆ
ಸಂಬಂಧಿಸಿದ ತೊಂದರೆಗಳನ್ನು ಎದುರಿಸಬೇಕಾಗಬಹುದು. ಪ್ರೀತಿಯ ಜೀವನದಲ್ಲಿ ಉತ್ತಮ ತಿಳುವಳಿಕೆಯಿಂದ ನಡೆದರೆ,
ಜೇವನವು ಸರಿಯಾಗಿರುತ್ತದೆ. ದಾಂಪತ್ಯ ಜೀವನದಲ್ಲಿ ಬಿಸಿಲು ನೆರಳಿನ ವಾತಾವರಣವಿರುತ್ತದೆ. ಜೀವನ ಸಂಗಾತಿಯೊಂದಿಗೆ
ಪ್ರಾಮಾಣಿಕರಾಗಿರಬೇಕು. ಈ ವರ್ಷ ಜೀವನ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ . ಕುಟುಂಬದಲ್ಲಿ
ಕೆಲವು ಸಮಸ್ಯೆಗಳಿಂದಾಗಿ , ನಿಮ್ಮ ತಾಯಿಯ ಆರೋಗ್ಯವು ಹದಗೆಡಬಹುದು. ಆದ್ದರಿಂದ ಅವರ ಬಗ್ಗೆ ವಿಶೇಷ
ಗಮನ ಹರಿಸಿ. ವೃತ್ತಿ ಜೀವನದ ದೃಷ್ಟಿಕೋನದಿಂದ ನೋಡಿದರೆ, ಉದ್ಯೋಗದಲ್ಲಿ ಸ್ವಲ್ಪ ಏರಿಳಿತಗಳನ್ನು ಎದುರಿಸಬೇಕಾಗುತ್ತದೆ.
ಈ ವರ್ಷವಿದ್ಯಾರ್ಥಿಗಳು ಅಧ್ಯಯನ ಕ್ಷೇತ್ರದಲ್ಲಿ ಹೆಚ್ಚಾಗಿ ಪರಿಶ್ರಮಿಸಬೇಕೆಂದು ಸೂಚಿಸಲಾಗುತ್ತಿದೆ.
ಇದರಿಂದ ನೀವು ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ. ನಿಮ್ಮ ವೆಚ್ಚಳಗಗಳು ಹೆಚ್ಚಾಗಬಹುದು ಆದ್ದರಿಂದ
ನಿಮ್ಮ ಉಳಿತಾಯದ ಬಗ್ಗೆ ಗಮನ ಕೊಡಿ.
ವಾರ್ಷಿಕ
ರಾಶಿಫಲ 2020 ರ ಪ್ರಕಾರ, ಸಿಂಹ ರಾಶಿಚಕ್ರದ ಜನರಿಗೆ ಈ ವರ್ಷ ಉತ್ತಮವಾಗಿರುತ್ತದೆ. ಈ ವರ್ಷ ನೀವು
ವಿದೇಶದಲ್ಲಿ ಉದ್ಯೋಗವನ್ನು ಪಡೆಯಬಹುದು. ನೀವು ಆರ್ಥಿಕ ಲಾಭ ಗಳಿಸುವ ಸಾಧ್ಯತೆಯಿದೆ. ನೀವು ಈ ವರ್ಷ
ಹೊಸ ಮನೆಯನ್ನು ಖರೀದಿಸಬಹುದು. ಸಂಪೂರ್ಣ ವರ್ಷ ಉತ್ತಮ ಆರೋಗ್ಯವನ್ನು ಅನುಭವಿಸುವಿರಿ. ಇದರೊಂದಿಗೆ
ಯೋಗ ಮತ್ತು ಧ್ಯಾನವನ್ನು ನಿಯಮಿತವಾಗಿ ಬಳಸಿದರೆ, ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಸಮಸ್ಯೆಗಳು
ಉಂಟಾಗುವುದಿಲ್ಲ. ಪ್ರೀತಿಯ ಜೀವನದಲ್ಲಿ ತಪ್ಪು ತಿಳುವಳಿಕೆಗಳಿಂದ ಸಂಬಂಧ ಕೊನೆಗೊಳ್ಳುವ ಸಾಧ್ಯತೆಯಿದೆ.
ವರ್ಷದ ಮಧ್ಯದಲ್ಲಿ ಕೆಲವು ಆರ್ಥಿಕ ಏರಿಳಿತಗಳನ್ನು ಎದುರಿಸಬೇಕಾಗಬಹುದು. ಈ ವರ್ಷ ವಿದ್ಯಾರ್ಥಿಗಳಿಗೆ
ಉತ್ತಮ ಯಶಸ್ಸನ್ನು ನೀಡಲಿದೆ, ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ನಿಮ್ಮ ಸ್ಥೈರ್ಯವನ್ನು
ಹೆಚ್ಚಿಸುತ್ತದೆ. ವರ್ಷದ ಕೊನೆಯಲ್ಲಿ ಕೂಡ ಆರ್ಥಿಕ ಪರಿಸ್ಥಿತಿ ಸ್ವಲ್ಪ ಕುಸಿಯಬಹುದು. ಕೆಲಸದ ಪ್ರದೇಶದಲ್ಲಿ
ಒತ್ತಡಗಳು ಉಂಟಾಗಬಹುದು.
ವಾರ್ಷಿಕ
ರಾಶಿಫಲ 2020 ರ ಪ್ರಕಾರ, ಈ ವರ್ಷ ಕನ್ಯಾ ರಾಶಿಚಕ್ರದ ಜನರು ಬಹಳ ಸಂತೋಷವಾಗಿರುತ್ತಾರೆ. ಈ ವರ್ಷ
ಅದೃಷ್ಟ ಅವರೊಂದಿಗೆ ಇರುತ್ತದೆ. ಇದರಿಂದ ಈ ರಾಶಿಚಕ್ರದ ಜನರ ಅರೋಗ್ಯ ಉತ್ತಮವಾಗಿರುತ್ತದೆ. ಅವರು
ತಮ್ಮ ಸಂಗಾತಿಯೊಂದಿಗೆ ಪ್ರಾಮಾಣಿಕರಾಗಿರುವುದರಿಂದ ಪ್ರೀತಿಯ ಜೀವನವು ಸುಖ, ಶಾಂತಿ, ಸಂತೋಷ ಮತ್ತು
ಪ್ರಣಯದಿಂದ ತುಂಬಿರುತ್ತದೆ. ನಿಮ್ಮ ಜೀವನ ಸಂಗಾತಿ ಕೆಲಸದ ಪ್ರದೇಶದಲ್ಲಿ ಪದೋನ್ನತಿ ಪಡೆಯಬಹುದು.
ಇದು ನಿಮ್ಮ ಕುಟುಂಬ ಜೀವನದಲ್ಲಿ ಸಂತೋಷವನ್ನು ಉಳಿಸುತ್ತದೆ. ಆರ್ಥಿಕ ಪಕ್ಷದ ಬಗ್ಗೆ ಮಾತನಾಡಿದರೆ
ಈ ವರ್ಷ ತುಂಬಾ ಅನುಕೂಲಕರವಾಗಿದೆ ಮತ್ತು ಹಣವು ನಿರಂತರವಾಗಿ ಮುಂದುವರಿಯುತ್ತದೆ. ವಿದ್ಯಾರ್ಥಿಗಳು
ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ಈ ವರ್ಷ ನಿಮ್ಮ ಸ್ನೇಹಿತರಿಂದ ಸಹ ನೀವು ಬೆಂಬಲವನ್ನು
ಪಡೆಯುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ವರ್ಷ 2020 ಕನ್ಯಾ ರಾಶಿಚಕ್ರದ ಜನರಿಗೆ ಅತ್ಯುತ್ತಮವಾಗಲಿದೆ.
ವಾರ್ಷಿಕ
ರಾಶಿಫಲ 2020 ರ ಪ್ರಕಾರ, ತುಲಾ ರಾಶಿಚಕ್ರದ ಜನರು ಆರೋಗ್ಯದಲ್ಲಿ ಕೆಲವು ತೊಂದರೆಗಳನ್ನು ಹೊಂದಿದ್ದಾರೆ.
ಅಜೀರ್ಣ, ವಾಯು ಕಾಯಿಲೆ, ತಲೆನೋವು, ಕೀಲು ನೋವು, ಚಿಕನ್ ಪೋಕ್ಸ್, ಮತ್ತು ದೇಹದ ನೋವು ಮುಂತಾದ ಸಮಸ್ಯೆಗಳು
ನಿಮಗೆ ಅಸಮಾಧಾನಗೊಳಿಸಬಹುದು. ನಿಮ್ಮ ಆರೋಗ್ಯವು ದುರ್ಬಲವಾಗಿರುತ್ತದೆ. ಆದ್ದರಿಂದ ನಿಮ್ಮ ಆರೋಗ್ಯದ
ಬಗ್ಗೆ ವಿಶೇಷ ಗಮನಹರಿಸಬೇಕು. ವ್ಯಾಪಾರದ ಬಗ್ಗೆ ಮಾತನಾಡಿದರೆ, ಪಾಲುದಾರಿಕೆಯಲ್ಲಿ ಸ್ವಲ್ಪ ಎಚ್ಚರಿಕೆಯಿಂದಿರಿ,
ಏಕೆಂದರೆ ಪಾಲುದಾರರರು ನಿಮಗೆ ಮೋಸ ಮಾಡಬಹುದು. ಪ್ರೀತಿಯ ಜೀವನದಲ್ಲಿ ಪ್ರೀತಿ ಮತ್ತು ಪ್ರಣಯ ಹೆಚ್ಚಾಗುತ್ತದೆ.
ನಿಮ್ಮ ಜೀವನ ಪಾಲುದಾರರೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಈ ವರ್ಷ ಮಕ್ಕಳ ಮೇಲೆ ಹೆಚ್ಚಾಗಿ ಹಣವನ್ನು
ಖರ್ಚು ಮಾಡಬಹುದು. ನಿಮ್ಮ ಮಕ್ಕಳು ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಹೆಚ್ಚು ಶ್ರಮಿಸಬೇಕಾಗುತ್ತದೆ.
ಕುಟುಂಬ ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ. ವರ್ಷದ ಕೊನೆಯಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ
ಉತ್ತಮವಾಗಬಹುದು. ಈ ವರ್ಷ ನೀವು ಯಾವುದೇ ಹೊಸ ವ್ಯವಹಾರದ ಮೇಲೆ ಹೂಡಿಕೆ ಮಾಡುವುದನ್ನು ತಪ್ಪಿಸಿ.
ವಾರ್ಷಿಕ
ರಾಶಿಫಲ 2020 ರ ಪ್ರಕಾರ, ಈ ವರ್ಷ ನೀವು ಉತ್ತಮ ಆರೋಗ್ಯವನ್ನು ಅನುಭವಿಸುವಿರಿ. ಪೂರ್ಣ ವರ್ಷದಲ್ಲಿ
ಕೆಲವು ತೊಂದರೆಗಳನ್ನು ಎದುರಿಸಬಹುದು ಆದರೆ ಯಾವುದೇ ರೀತಿಯ ದೊಡ್ಡ ಸಮಸ್ಯೆ ಉಂಟಾಗುವುದಿಲ್ಲ. ವೈವಾಹಿಕ
ಜೀವನಕ್ಕೂ ಈ ವರ್ಷ ಉತ್ತಮವಾಗಲಿದೆ. ಒಂಟಿಯಾಗಿರುವವರ ಮದುವೆಯಾಗಬಹುದು. ಪ್ರೀತಿಯಲ್ಲಿ ಇರುವವರು ತಮ್ಮ
ಪ್ರೀತಿ ಪಾಲುದಾರರೊಂದಿಗೆ ಉತ್ತಮ ಸಮಯವನ್ನು ಕಳೆಯಬಹುದು. ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ, ಕುಟುಂಬದಲ್ಲಿ
ಯಾವುದೇ ವಿಷಯದಿಂದ ವಿವಾದ ಅಥವಾ ಜಗಳವಾಗಬಹುದು. ಆದ್ದರಿಂದ ತಾಳ್ಮೆಯಿಂದ ಎಲ್ಲಾವನ್ನು ಸರಿಮಾಡುವುದು
ನಿಮ್ಮ ಜವಾಬ್ದಾರಿ ಮತ್ತು ನಿಮ್ಮ ಭಾಷೆಯನ್ನು ಸಿಹಿಗೊಳಿಸಿ ಮಾತನಾಡಿ. ಕುಟುಂಬದಲ್ಲಿ ಒಬ್ಬ ಹೊಸ ವ್ಯಕ್ತಿಯ
ಆಗಮನವು ಸಂತೋಷವನ್ನು ತರುತ್ತದೆ. ಆರ್ಥಿಕ ದೃಷ್ಟಿಕೋನದಿಂದ ಈ ವರ್ಷ ಉತ್ತಮವಾಗಬಹುದು ಮತ್ತು ಹಣವನ್ನು
ಉಳಿಸಲು ಸಾಧ್ಯವಾಗುತ್ತದೆ. ಉದ್ಯೋಗದಲ್ಲಿ ಪ್ರಗತಿಯನ್ನು ಹೊಂದಿದ್ದೀರಿ. ಹಣದ ವಿಷಯದಲ್ಲಿ ಮುಂದುವರಿಯುವುದಕ್ಕೆ
ಅವಕಾಶಗಳನ್ನು ಪಡೆಯುತ್ತಿರಿ. ಈ ವರ್ಷ ಹೊಸ ಕೆಲಸ ಆರಂಭಿಸಲು ಬಯಸಿದರೆ, ನೀವು ಉತ್ತಮ ಫಲಿತಾಂಶಗಳನ್ನು
ಪಡೆಯಬಹುದು.
ವಾರ್ಷಿಕ
ರಾಶಿಫಲ 2020 ರ ಪ್ರಕಾರ, ಧನು ರಾಶಿ ಜನರ ಪ್ರೀತಿಯ ಸಂಬಂಧಗಳಿಗೆ ಈ ವರ್ಷ ಬಹಳಷ್ಟು ಮಟ್ಟಿಗೆ ಉತ್ತಮವಾಗಲಿದೆ.
ನೀವಿಬ್ಬರರು ಸಂಬಂಧಗಳಲ್ಲಿ ಸಾಮೀಪ್ಯವನ್ನು ಅನುಭವಿಸುವಿರಿ. ಅವರು ಕೂಡ ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ.
ನೀವು ವೈವಾಹಿಕ ಜೀವನವನ್ನು ಕೂಡ ಉತ್ತಮ ಮಟ್ಟಿಗೆಯಲ್ಲಿ ಆನಂದಿಸುವಿರಿ. ಮನೆಯ ಕುಟುಂಬದಲ್ಲಿ ಹೊಸ
ಸದಸ್ಯ ಬರಬಹುದು. ನಿಮ್ಮ ಜೀವನ ಸಂಗಾತಿಯ ಆರೋಗ್ಯದ ಬಗ್ಗೆ ವಿಶೇಷ ಗಮನ ನೀಡಬೇಕು. ನಿಮ್ಮ ಅರೋಗ್ಯ
ಉತ್ತಮವಾಗಿರುತ್ತದೆ. ಸ್ವಲ್ಪ ಕಾಲದಿಂದ ನಡೆಯುತ್ತಿರುವ ರೋಗವು ಸರಿಯಾಗಬಹುದು. ಈ ವರ್ಷ ನೀವು ಆಸ್ತಿಗೆ
ಸಂಬಂಧಿಸಿದ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು. ವರ್ಷದ ಆರಂಭದಲ್ಲಿ ನಿಮ್ಮ ಉದ್ಯೋಗ ಅಪಾಯದಲ್ಲಿರುತ್ತದೆ
ಆದರೆ ನಿಮ್ಮ ಕಠಿಣ ಪರಿಶ್ರಮದಿಂದ ಅದು ಸರಿಯಾಗಲಿದೆ. ಇಷ್ಟಾದರೂ ನಿಮ್ಮ ಹತ್ತಿರ ಯಾವುದೇ ರೀತಿಯ ಹಣದ
ಕೊರತೆ ಇರುವುದಿಲ್ಲ. ವಿದ್ಯಾರ್ಥಿಗಳು ಮಿಶ್ರಿತ ಫಲಿತಾಂಶಗಳನ್ನು ಪಡೆಯಬಹುದು. ಈ ವರ್ಷ ಉತ್ತಮ ಭವಿಷ್ಯವನ್ನು
ಸೂಚಿಸುತ್ತದೆ.
ವಾರ್ಷಿಕ
ರಾಶಿಫಲ 2020 ರ ಪ್ರಕಾರ, ಈ ವರ್ಷ ನಿಮಗೆ ಮಿಶ್ರಿತ ಫಲಿತಾಂಶಗಳನ್ನು ನೀಡುತ್ತದೆ. ಅರೋಗ್ಯ ಸಂಬಂಧಿತ
ವಿಷಯಗಳಲ್ಲಿ ವರ್ಷ ಸಾಮಾನ್ಯವಾಗಿರುತ್ತದೆ. ಪ್ರೀತಿಯ ಜೀವನಕ್ಕೂ ಕೂಡ ಈ ವರ್ಷ ಅನುಕೂಲಕರವಾಗಲಿದೆ.
ಮಕರ ರಾಶಿಚಕ್ರದ ಜನರಲ್ಲಿ ಕೆಲವರು ಈ ವರ್ಷ ವಿವಾಹದ ಮೇಳ ಕೇಳಲು ಸಾಧ್ಯವಾಗುತ್ತದೆ. ವೈವಾಹಿಕ ಜನರ
ಜೀವನದಲ್ಲಿ ಸ್ವಲ್ಪ ಏರಿಳಿತಗಳಿರುತ್ತವೆ. ಮಕ್ಕಳ ಬಗ್ಗೆ ಮಾತನಾಡಿದರೆ ಸಮಯ ಅವರಿಗೆ ಅನುಕೂಲಕರವಾಗಿಲ್ಲ
ಆದ್ದರಿಂದ ಅವರ ಬಗ್ಗೆ ವಿಶೇಷ ಗಮನ ಹರಿಸಬೇಕು. ಕುಟುಂಬ ಜೀವನವು ಉತ್ತಮವಾಗಲಿದೆ ಮತ್ತು ಕುಟುಂಬದಲ್ಲಿ
ನಿಮ್ಮ ಗೌರವ ಮತ್ತು ಸಂತೋಷ ಹೆಚ್ಚಾಗುತ್ತದೆ. ಒಡಹುಟ್ಟಿದವರನ್ನು ಚೆನ್ನಾಗಿ ನೋಡಿಕೊಳ್ಳುವುದು ಉತ್ತಮ.
ಈ ಮಧ್ಯೆ ನಿಮ್ಮ ಆರ್ಥಿಕ ಪರಿಸ್ಥಿತಿ ದುರ್ಬಲಗೊಳ್ಳಬಹುದು. ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು
ಕಠಿಣ ಪರಿಶ್ರಮ ಮಾಡಬೇಕು ಆಗ ಮಾತ್ರ ಅವರು ಅವರಿಗೆ ನೆಚ್ಚಿದ ಫಲಿತಾಂಶಗಳನ್ನು ಪಡೆಯಬಹುದು. ಈ ವರ್ಷ
ದುರ್ಬಲವಾಗಿರುವುದರಿಂದ ಹಣ ಖರ್ಚಿಸುವಾಗ ಮುಂಬರುವ ಭವಿಷ್ಯದ ಸಮಯದ ಬಗ್ಗೆ ಯೋಚಿಸಬೇಕು. ಇದು ನಿಮ್ಮನ್ನು
ಯಾವುದೇ ರೀತಿಯ ಆರ್ಥಿಕ ಸಮಸ್ಯೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ. ನಿರುದ್ಯೋಗಿಗಳಿಗೆ ಸ್ಥಿರ ಉದ್ಯೋಗವನ್ನು
ಪಡೆಯುವ ಪ್ರಬಲ ಸಾಧ್ಯತೆ ಇದೆ.
ವಾರ್ಷಿಕ
ರಾಶಿಫಲ 2020 ರ ಪ್ರಕಾರ, ಕುಂಭ ರಾಶಿಚಕ್ರದ ಜನರು ಈ ವರ್ಷ ಸಾಕಷ್ಟು ಸವಾಲುಗಳನ್ನು, ಎದುರಿಸಬೇಕಾಗಬಹುದು.
ಈ ವರ್ಷ ನಿಮಗೆ ಆರೋಗ್ಯದ ಅನೇಕ ತೊಂದರೆಗಳು ಉಂಟಾಗಬಹುದು. ಆರೋಗ್ಯದ ದೃಷ್ಟಿಯಿಂದ, ವಿಶೇಷ ಜಾಗರೂಕರಾಗಿರಬೇಕು.
ಈ ವರ್ಷ ನೀವು ಅನೇಕ ಪ್ರವಾಸಗಳಿಗೆ ಹೋಗಬಹುದು. ನಿಮ್ಮ ಆದಾಯವು ಉತ್ತಮವಾಗಿರುತ್ತದೆ ಆದರೂ ನೀವು ಹಣ
ಕಾಸಿನ ಸಮಸ್ಯೆಗಳನ್ನು ಹೊಂದಿರಬಹುದು. ಕುಟುಂಬದ ಸದಸ್ಯರೊಂದಿಗೆ ನೀವು ಧಾರ್ಮಿಕ ಸ್ಥಳಗಳಿಗೆ ಪ್ರಯಾಣ
ಮಾಡಬಹುದು. ನಿಮ್ಮ ಒಡಹುಟ್ಟಿದವರನ್ನು ಚೆನ್ನಾಗಿ ನೋಡಿಕೊಳ್ಳಿ ಮತ್ತು ಅವರಿಗೆ ಅಗತ್ಯವಿರುವಾಗ ಸಹಾಯ
ಮಾಡಿ. ಈ ವರ್ಷ ನೀವು ಆಧ್ಯಾತ್ಮಿಕತೆಗೆ ಸಂಬಂಧಿಸಿದ ಅನೇಕ ಉತ್ತಮ ಅನುಭವಗಳನ್ನು ಪಡೆಯುತ್ತೀರಿ. ವಿದೇಶಕ್ಕೆ
ಹೋಗಲು ಬಯಸುವ ಜನರ ಆಸೆಯನ್ನು ಈ ವರ್ಷ ಈಡೇರಿಸಬಹುದು. ದಾಂಪತ್ಯ ಜೀವನದ ಬಗ್ಗೆ ಮಾತನಾಡಿದರೆ, ಕುಟುಂಬ
ಏರಿಳಿತಗಳಿಂದ ತುಂಬಿರುತ್ತದೆ, ಒಂದು ವೇಳೆ ಸಂತೋಷವಾಗಿದ್ದರೆ ಮತ್ತೊಂದು ವೇಳೆ ಏನಾದರು ಒಂದು ವಿವಾದದ
ವಾತಾವರಣವಿರುತ್ತದೆ. ಪ್ರೀತಿಯ ಜೀವನ ಸ್ವಲ್ಪ ಪ್ರತಿಕೂಲಕರವಾಗಲಿದೆ ಆದ್ದರಿಂದ ನಿಮ್ಮ ಪ್ರೀತಿಪಾತ್ರರೊಂದಿಗೆ
ಸಮಯವನ್ನು ಕಳೆಯಿರಿ, ಇದು ಪರಿಸ್ಥಿತಿಗಳನ್ನು ಸರಿಮಾಡಲು ಕೆಲಸ ಮಾಡುತ್ತದೆ. ಮಕ್ಕಳಿಗೆ ಈ ವರ್ಷ ಅನುಕೂಲಕರವಾಗಿಲ್ಲ.
ವಾರ್ಷಿಕ
ರಾಶಿಫಲ 2020 ರ ಪ್ರಕಾರ, ಮೀನಾ ರಾಶಿಚಕ್ರದ ಜನರು ಈ ವರ್ಷ ತಮ್ಮ ಕುಟುಂಬ ಸದಸ್ಯರು, ಆಪ್ತರು ಮತ್ತು
ಸ್ನೇಹಿತರನ್ನು ಭೇಟಿಯಾಗಲು ಅನೇಕ ಅವಕಾಶಗಳನ್ನು ಪಡೆಯುತ್ತಾರೆ. ನಿಮ್ಮ ಕಠಿಣ ಪರಿಶ್ರಮದಿಂದ ನೀವು
ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ. ವೃದ್ಧರ ಆಶೀರ್ವಾದ
ಪಡೆಯುವಿರಿ. ಈ ವರ್ಷ ನಿಮ್ಮ ಆರ್ಥಿಕ ಪರಿಸ್ಥಿತಿ ಬಲವಾಗಿರುತ್ತದೆ. ಈ ವರ್ಷ ನೀವು ನಿಮ್ಮ ಸ್ವಂತ
ಕೆಲಸವನ್ನು ಪ್ರಾರಂಭಿಸಬಹುದು. ಅತಿಯಾದ ಕೆಲಸದ ಒತ್ತಡದಿಂದ ನೀವು ಆಯಾಸಗೊಳ್ಳಬಹುದು. ಇದು ನಿಮ್ಮ
ಕೆಲಸ ಮತ್ತು ದೇಹದ ಮೇಲೆ ಪರಿಣಾಮ ಬೀರಬಹುದು. ಈ ವರ್ಷ ನೀವು ನಿಮ್ಮ ಆಸೆಗಳನ್ನು ಈಡೇರಿಸಬಹುದು. ಕುಟುಂಬದಲ್ಲಿ
ಆಸ್ತಿಗೆ ಸಂಬಂಧಿಸಿದ ವಿಷಯಗಳಿಂದ ವಿವಾದಗಳು ಉಂಟಾಗಬಬಹುದು. ನೀವು ನಿಮ್ಮ ತಿಳುವಳಿಕೆಯಿಂದ ಆ ತೊಂದರೆಗಳಿಂದ
ಹೊರಬರುತ್ತೀರಿ. ದೆ. ಈ ವರ್ಷ ನಿಮ್ಮ ಪ್ರಯಾಣಗಳು ಕಡಿಮೆ ಇರುತ್ತವೆ . ವೈವಾಹಿಕ ಜೇವನದ ಬಗ್ಗೆ ಮಾತನಾಡಿದರೆ
, ಕಾರ್ಯನಿರತ ವೇಳಾಪಟ್ಟಿಯಿಂದ ಜೀವನ ಸಂಗಾತಿಗಾಗಿ ಸ್ವಲ್ಪ ಸಮಯ ತೆಗೆದು ಅವರೊಂದಿಗೆ ಆ ಸಮಯಾವನ್ನು
ಕಳೆಯುವುದು ಒಳ್ಳೆಯದು ಎಂದು ಸೂಚಿಸಲಾಗಿದೆ